ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಒಬ್ಬ ಯಕ್ಷಗಾನದ ಖ್ಯಾತ ಭಾಗವತರು ಮತ್ತು ಪ್ರಸಂಗಕರ್ತರು. ಅನೇಕ ಮೇಳಗಳಲ್ಲಿ ಭಾಗವತರಾಗಿದ್ದು ಸುಮಾರು ಕನ್ನಡ ಮತ್ತು ತುಳು ಪ್ರಸಂಗಗಳನ್ನು ಬರೆದಿದ್ದಾರೆ. ಯಕ್ಷರಂಗದ ಅಭಿನವ ವಾಲ್ಮೀಕಿ ಎಂಬ ಬಿರುದು ಇವರಿಗಿದೆ. == ಜೀವನ == === ಬಾಲ್ಯ === ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬೊಟ್ಟಿಕೆರೆ ಎಂಬಲ್ಲಿ ಜೂನ್ ೨೧, ೧೯೫೩ ರಲ್ಲಿ ಜನಿಸಿದರು. ತಂದೆ ತ್ಯಾಂಪಣ್ಣ ಪೂಂಜ; ತಾಯಿ ಜಲಜಾ ಪೂಂಜ. === ಶಿಕ್ಷಣ === ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಬಿ ಎಸ್ಸಿ. ಪದವೀಧರರು. ಆನೆಗುಂಡಿ ಗಣಪತಿ ಭಟ್ ಹಾಗೂ ಹೊಸಹಿತ್ಲು ಮಹಾಲಿಂಗ ಭಟ್ ಅವರಿಂದ ಭಾಗವತಿಕೆ ಅಭ್ಯಾಸ ಮಾಡಿದ್ದಾರೆ. === ವೃತ್ತಿಜೀವನ === ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಉಪ್ಪಳ ಭಗವತಿ ಮೇಳ, ಮುಂಬೈ ಗೀತಾಂಬಿಕಾ ಯಕ್ಷಗಾನ ಮಂಡಳಿ, ಪುತ್ತೂರು ಮೇಳ, ಕರ್ಣಾಟಕ ಮೇಳ, ಕಟೀಲು ಮೇಳಗಳಲ್ಲಿ ಭಾಗವತರಾಗಿ ವೃತ್ತಿ ನಿರ್ವಹಿಸಿದ್ದಾರೆ.. === ವೈವಾಹಿಕ ಜೀವನ === ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ೧೯೯೦ ರಲ್ಲಿ ಶೋಭಾ ಪೂಂಜ ಅವರನ್ನು ವಿವಾಹವಾದರು. == ಸಾಹಿತ್ಯ ಕೃಷಿ == ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರು ಬರೆದ ರಾಮಾಯಣ ಆಧಾರಿತ 'ಮಾನಿಷಾದ' ಪ್ರಸಂಗವು ಬಹಳ ಪ್ರಸಿದ್ಧಿಯನ್ನು ಹೊಂದಿದೆ. == ಯಕ್ಷಗಾನ ಪ್ರಸಂಗ ಕೃತಿಗಳು == ನಳಿನಾಕ್ಷ ನಂದಿನಿ ಮಾನಿಷಾದ ಮಾತಂಗ ಕನ್ಯೆ ಸತಿ ಉಲೂಪಿ ವಧೂ ವೈಶಾಲಿನಿ ಉಭಯ ಕುಲ ಬಿಲ್ಲೋಜ ಕ್ಷಾತ್ರ ಮೇಧ ರಾಜಾ ದ್ರುಪದ ಮನ್ಮಥೋಪಾಖ್ಯಾನ ಗಂಡುಗಲಿ ಘಟೋತ್ಕಜ ಪಾಂಚಜನ್ಯ ಅಮರ ಸಿಂಧೂದ್ಭವ ರುದ್ರಪಾದ === ಕಾಲ್ಪನಿಕ ಯಕ್ಷಗಾನ ಪ್ರಸಂಗಗಳು === ಮೇಘ ಮಯೂರಿ ಮೇಘ ಮಾಣಿಕ್ಯ ಅಮೃತ ವರ್ಷಿಣಿ ಸ್ವ್ರರ್ಣ ನೂಪುರ === ತುಳು ಯಕ್ಷಗಾನ ಪ್ರಸಂಗಗಳು === ಐಗುಳೆ ದಚ್ಚಿನೆ ಕುಡಿಯೆನ ಕೊಂಬಿರೆಳ್ ಕುಡಿಯೆನ ಕಣ್ಣ್ ಪಟ್ಟದ ಕತ್ತಿ ದಳವಾಯಿ ಮುದ್ದಣ್ಣೆ ಸ್ವರ್ಣ ಕೇದಗೆ ಬಂಗಾರ್ದ ಗೆಜ್ಜೆ === ನಾಟಕಗಳು === ಹಿತ್ತಾಳೆ ಕಿವಿ ಪಗರಿದ ಪಾಸ್ === ನೃತ್ಯ ರೂಪಕಗಳು === ಅಂಧಕ ನಿದಾನ ಭುವನಾಭಿರಾಮ ಜೇವು ಕೇದಗೆ === ಇತರೆ ಕೃತಿಗಳು === ಬೀರೆ ದೇವು ಪೂಂಜೆ ಪ್ರಬಂಧಗಳು